ಪೊಲೀಸ್​ ಅಧಿಕಾರಿಯನ್ನು ಕೊಲ್ಲಲು ಸಾಧ್ಯವಾಗಿಲ್ಲವೆಂದು ಕೋಪದಲ್ಲಿ ಅವರ ಪತ್ನಿ ಹಾಗೂ ಮಗಳನ್ನು ಆರೋಪಿ ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದ ಸೂರಜ್​ಪುರ ಜಿಲ್ಲೆಯಲ್ಲಿ ನಡೆದಿದೆ. ಆತನಿಗೆ ಪೊಲೀಸ್​ ಅಧಿಕಾರಿಯನ್ನು ಕೊಲ್ಲಲು ಸಾಧ್ಯವಾಗದಿದ್ದಾಗ ಪತ್ನಿ ಹಾಗೂ ಮಗಳನ್ನು ಟಾರ್ಗೆಟ್​ ಮಾಡಿ, ಮನೆಗೆ ನುಗ್ಗಿ ಹರಿತವಾದ ಆಯುಧದಿಂದ ಕೊಲೆ ಂಆಡಿ ಅರೆಬೆತ್ತಲೆ ಮಾಡಿ ಹೊಲದಲ್ಲಿ ಎಸೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಸೋಮವಾರ ಬೆಳಗ್ಗೆ ಅಪರಾಧ ನಡೆದ ಸ್ಥಳದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಹೊಲವೊಂದರಲ್ಲಿ ಶವಗಳು ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರ ಪ್ರಕಾರ, ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಲದೀಪ್ ಸಾಹು ಅವರು ಅಕ್ಟೋಬರ್ 13 ರಂದು ಹೆಡ್ ಕಾನ್‌ಸ್ಟೆಬಲ್ ತಾಲಿಬ್ ಶೇಖ್ ಅವರ ಮನೆಗೆ ನುಗ್ಗಿ ಅವರ ಪತ್ನಿ ಮೆಹನಾಜ್ (35) ಮತ್ತು ಮಗಳು ಅಲಿಯಾ (11) ರನ್ನು ಹರಿತವಾದ ಆಯುಧದಿಂದ ಕೊಂದಿದ್ದರು.

ಇದಕ್ಕೂ ಮೊದಲು, ಚೌಪಟ್ಟಿ ಪ್ರದೇಶದಲ್ಲಿ ದುರ್ಗಾ ಪೂಜೆಯ ವಿಗ್ರಹ ನಿಮಜ್ಜನ ಕಾರ್ಯಕ್ರಮದಲ್ಲಿ ಸಾಹು ಅವರು ಪೊಲೀಸ್ ಪೇದೆಯೊಂದಿಗೆ ಜಗಳವಾಡಿದ್ದರು, ಮತ್ತು ಅವರ ಮೇಲೆ ಬಿಸಿ ಎಣ್ಣೆಯನ್ನು ಸುರಿದಿದ್ದರು ಎಂದು ಆರೋಪಿಸಲಾಗಿದೆ. ಕಾನ್‌ಸ್ಟೆಬಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ತಾಲಿಬ್ ಶೇಖ್ ಮತ್ತು ಅವರ ತಂಡವು ಸಾಹುವನ್ನು ಬಂಧಿಸಲು ಸ್ಥಳಕ್ಕೆ ತಲುಪಿತು, ನಂತರ ಕಾರನ್ನು ಪೊಲೀಸ್​ ಅಧಿಕಾರಿಯ ಮೇಲೆ ಓಡಿಸಲು ಸಾಹು ಪ್ರಯತ್ನಿಸಿದ್ದರು. ಹೇಗೋ ಬಚಾವಾಗಿದ್ದರು. ಸಾಹು ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ಆರೋಪಿಯನ್ನು ಪತ್ತೆಹಚ್ಚಲು ಶೇಖ್ ಮತ್ತು ಅವನ ತಂಡವು ಪ್ಲ್ಯಾನ್​ ಮಾಡುತ್ತಿದ್ದಾರೆ, ಸಾಹು ಹೆಡ್ ಕಾನ್‌ಸ್ಟೆಬಲ್ ಮನೆಗೆ ನುಗ್ಗಿ ಮತ್ತು ಅವನ ಹೆಂಡತಿ ಮತ್ತು ಮಗಳನ್ನು ಕೊಂದಿದ್ದಾರೆ.

ಹೆಡ್ ಕಾನ್‌ಸ್ಟೆಬಲ್ ಶೇಖ್ ಭಾನುವಾರ ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿರುವ ವಿಷಯ ತಿಳಿದು ಬಂದಿದೆ. ಕೋಪಗೊಂಡ ಸ್ಥಳೀಯರು ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಿದರು ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಅವರು ಸಾಹು ಮನೆಯನ್ನು ಧ್ವಂಸ ಮಾಡಿದರು. ಮನೆಯ ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಸುಟ್ಟು ಹಾಕಿದರು.

ಘಟನೆಯ ಸಂದರ್ಭದಲ್ಲಿ ಸಾಹು ಅವರ ಕುಟುಂಬ ಸದಸ್ಯರು ಯಾರೂ ಮನೆಯಲ್ಲಿ ಇರಲಿಲ್ಲ. ಏತನ್ಮಧ್ಯೆ, ಘಟನೆಯ ನಂತರ ಪರಾರಿಯಾಗಿರುವ ಕುಲದೀಪ್ ಸಾಹುವನ್ನು ಪತ್ತೆಹಚ್ಚಲು ಪೊಲೀಸರು ನಾಲ್ಕು ತಂಡಗಳನ್ನು ಹೊಂದಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಎನ್ ಎಸ್ ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ,  ಕಾಂಗ್ರೆಸ್ ಯುವ ಘಟಕದ ಸದಸ್ಯ ಎಂಬುದಕ್ಕೆ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 


Discover more from ಕರುನಾಡು ಫೈನಾನ್ಸ್

Subscribe to get the latest posts sent to your email.

Leave a Reply