ಗಂಡ ತನ್ನ ವಾರಗಿತ್ತಿಗೆ ಪಿಜ್ಜ ನೀಡಿದನೆಂದು ಸಿಟ್ಟಿಗೆದ್ದ ಮಹಿಳೆ ತನ್ನ ನಾಲ್ವರು ಸಹೋದರರನ್ನು ಕರೆಸಿ ಗಲಾಟೆ ನಡೆಸಿದ ವೇಳೆ ಗುಂಡಿನ ದಾಳಿಯಲ್ಲಿ ವಾರಗಿತ್ತಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪೂರ್ವ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ಅಕ್ಟೋಬರ್ 17 ರಂದು ಮಧ್ಯರಾತ್ರಿ 1.30 ಕ್ಕೆ ಮನೆಯೊಂದರ ಹೊರಗೆ  ಗುಂಡಿನ ದಾಳಿ ನಡೆದಿದೆ. ಈ ವೇಳೆ ಗಾಯಗೊಂಡಿದ್ದ ಮಹಿಳೆಯನ್ನ ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುಂಡು ಹಾರಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.

ಗಾಯಗೊಂಡ ಮಹಿಳೆಗೆ ತಗುಲಿದ್ದ ಗುಂಡನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಆಕೆಯನ್ನು ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು.

ಮಾಹಿತಿ ಪ್ರಕಾರ ಸಾದಿಯಾ ಎಂಬ ಮಹಿಳೆ ಲೋಹಾ ಮಾರ್ಕೆಟ್‌ನಲ್ಲಿ ವಾಸಿಸುವ ಜೀಶಾನ್‌ನನ್ನು ಮದುವೆಯಾಗಿದ್ದಾಳೆ. ಸಾದಿಯಾಗೆ ಭಾವ ಮತ್ತು ವಾರಗಿತ್ತಿ ಇದ್ದು ಎರಡೂ ಕುಟುಂಬಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಮನೆಯವರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಬುಧವಾರ ಜೀಶಾನ್ ಮನೆಗೆ ಪಿಜ್ಜಾ ಖರೀದಿಸಿ ತಂದಿದ್ದು ಅದನ್ನು ತನ್ನ ಕಿರಿಯ ಸಹೋದರ ಜಾವೇದ್‌ನ ಹೆಂಡತಿ ಮತ್ತು ಅವರ ಮಕ್ಕಳಿಗೆ ನೀಡಿದ್ದಾನೆ. ಸಾದಿಯಾ ಇದನ್ನೆಲ್ಲ ನೋಡುತ್ತಿದ್ದು ಸಹಿಸಿಕೊಳ್ಳಲು ಆಗಿಲ್ಲ.

ಗಂಡ ತನ್ನ ತಮ್ಮನ ಹೆಂಡ್ತಿಗೆ ಪಿಜ್ಜಾ ತಿನ್ನಿಸಿದ್ದು ಸಾದಿಯಾಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಕೋಪಗೊಂಡು ತನ್ನ ನಾಲ್ವರು ಸಹೋದರರನ್ನು ಕರೆದು ತನ್ನ ವಾರಗಿತ್ತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಎರಡೂ ಕಡೆಯವರು ಪರಸ್ಪರ ನಿಂದಿಸಲು ಪ್ರಾರಂಭಿಸಿದರು. ಇದು ವಿಕೋಪಕ್ಕೆ ತಿರುಗಿ ಸಾದಿಯಾ ಸೋದರನೊಬ್ಬ ಹಾರಿಸಿದ ಗುಂಡು ಆಕೆಯ ವಾರಗಿತ್ತಿಗೆ ತಗುಲಿ ಗಾಯಗೊಂಡಳು.

ಕೂಡಲೇ ಆಕೆಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೊಟ್ಟೆಯಲ್ಲಿದ್ದ ಬುಲೆಟ್ ಅನ್ನು ಆಪರೇಷನ್ ಮೂಲಕ ಹೊರ ತೆಗೆಯಲಾಯಿತು. ಇದೇ ವೇಳೆ ಸಾದಿಯಾ ಅವರ ನಾಲ್ವರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುತ್ತಿದೆ.

 


Discover more from ಕರುನಾಡು ಫೈನಾನ್ಸ್

Subscribe to get the latest posts sent to your email.

Leave a Reply